ಮೌಲ್ಯವುಳ್ಳ ಜೀವನ 【ಚರ್ಚ್ ಆಫ್ ಗಾಡ್, ಅನ್ ಸಂಗ್ ಹೊಂಗ್, ತಾಯಿ ದೇವರು】ಮೌಲ್ಯವುಳ್ಳ ಜೀವನ 【ಚರ್ಚ್ ಆಫ್ ಗಾಡ್, ಅನ್ ಸಂಗ್ ಹೊಂಗ್, ತಾಯಿ ದೇವರು】

【ಕನ್ನಡ, Kannada】
[ಈ ವೀಡಿಯೊ ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್’ನಿಂದ ಹಕ್ಕುಸ್ವಾಮ್ಯಗೊಂಡಿದೆ. ಅನಧಿಕೃತ ನಕಲು ಮತ್ತು ವಿತರಣೆ ನಿಷೇಧಿಸಲಾಗಿದೆ.]

ನಾಗರಿಕತೆಗೆ ಬರುವ ಮೊದಲು ಮೌಲ್ಯವನ್ನು ಹೊಂದಿದ್ದ ಕಲ್ಲುಗಳಿಗೆ
ಆಧುನಿಕ ಸಮಾಜದಲ್ಲಿ ಯಾವುದೇ ಬೆಲೆಯಿಲ್ಲ.
ಅಂತೆಯೇ, ಭೂಲೋಕದ ವಸ್ತುಗಳು ಮತ್ತು ಪರಲೋಕದ ವಸ್ತುಗಳ
ನಡುವಿನ ಮೌಲ್ಯದಲ್ಲಿ ಹೆಚ್ಚು ವ್ಯತ್ಯಾಸವಿದೆ.

ದೇವರ ಸಾಕ್ಷಿಗಳಾಗಿರುವುದು ಅತ್ಯಂತ ಮೌಲ್ಯವುಳ್ಳ ಜೀವನ
ಪರಲೋಕ ರಾಜ್ಯದ ಮೌಲ್ಯವನ್ನು ಈ ಭೂಮಿಯ ಮೇಲಿನ ಮೌಲ್ಯದ ಮಾನದಂಡದಿಂದ
ಅಳೆಯಲಾಗುವುದಿಲ್ಲ. ದೇವರು ತನ್ನ ಮಕ್ಕಳು ಭೂಮಿಯ ಮೇಲಿನ
ಬರಿದಾದ, ನಿಷ್ಪ್ರಯೋಜಕ ವಸ್ತುಗಳಿಗಾಗಿ ಬದುಕುವ ಬದಲು
ಅತ್ಯಂತ ಮೌಲ್ಯವುಳ್ಳ ಜೀವನವನ್ನು ನಡೆಸುವ ಮೂಲಕ
ಪರಲೋಕದ ಆಶೀರ್ವಾದಗಳನ್ನು ಸ್ವೀಕರಿಸಬೇಕೆಂದು ಬಯಸುತ್ತಾರೆ.
ಆದ್ದರಿಂದ ದೇವರು ಸಮಾರ್ಯ ಹಾಗೂ ಭೂಮಿಯ ಕಟ್ಟಕಡೆಯವರೆಗೂ
ಅವರ ಸಾಕ್ಷಿಗಳಾಗಿರಬೇಕೆಂದು ನಮಗೆ ಹೇಳಿದ್ದಾರೆ.

ಆದ್ದರಿಂದ, ದೇವರ ಜನರು ಆತ್ಮರಕ್ಷಣೆಯನ್ನು ನೀಡುವ
ಯೆರೂಸಲೇಮ್ ತಾಯಿಯ ಸಾಕ್ಷಿಗಳಾಗಿ
ಪರಲೋಕದ ಸುವಾರ್ತೆಯನ್ನು ಸಾರುತ್ತಾ ಆಕೆಯ ಕುರಿತು ಸಾಕ್ಷಿ ಕೊಡಬೇಕು.

ದಾನಿಯೇಲನು 12:3
“ಜ್ಞಾನಿಗಳು ತೇಜೋಮಯವಾದ ಆಕಾಶಮಂಡಲದಂತೆ ಪ್ರಕಾಶಿಸುವರು;
ಬಹು ಜನರನ್ನು ಸದ್ಧರ್ಮಿಗಳನ್ನಾಗಿ ಮಾಡುವವರು
ಯುಗಯುಗಾಂತರಗಳಲ್ಲಿಯೂ ನಕ್ಷತ್ರಗಳ ಹಾಗೆ ಹೊಳೆಯುವರು.”

〖World Mission Society Church of God〗https://watv.org
〖India〗 https://indiawmscog.org
〖WATV Media Cast〗 https://watvmedia.org/kn
〖Church of God Introduction〗https://introwmscog.com